uppi huli khaara film review | ಉಪ್ಪು ಹುಳಿ ಖಾರ ಚಿತ್ರ ವಿಮರ್ಶೆ | Filmibeat Kannada
  • 6 years ago
ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರದ 'ಫಾಸ್ಟ್ ರಿವ್ಯೂ' ನೀಡಲಾಗಿದೆ. ಸಸ್ಪೆನ್ಸ್ ನೊಂದಿಗೆ ಆರಂಭವಾಗುವ 'ಉಪ್ಪು ಹುಳಿ ಖಾರ', ಮಧ್ಯಂತರವರೆಗೂ ಪ್ರೇಕ್ಷಕರನ್ನ ಪೂರ್ತಿಯಾಗಿ ರಂಜಿಸುತ್ತೆ. ಲವ್, ಆಕ್ಷನ್, ಕಾಮಿಡಿ, ಮೆಸೆಜ್ ಎಲ್ಲವೂ ಸೇರಿದ ಮಿಕ್ಸ್ ಮಸಾಲ ಪ್ಯಾಕೇಜ್ ಇದು. ದ್ವಿತೀಯಾರ್ಧದಲ್ಲಿ ಸಸ್ಪೆನ್ಸ್ ಗೆ ಟ್ವಿಸ್ಟ್ ಕೊಟ್ಟು, ಸಮಾಜಕ್ಕೊಂದು ಗಟ್ಟಿಯಾದ ಸಂದೇಶವಿಟ್ಟು ಮನರಂಜನೆಯಾಗಿ ಪ್ರೆಸೆಂಟ್ ಮಾಡಲಾಗಿದೆ. ಮಾಲಾಶ್ರೀ ಸೇರಿದಂತೆ ಮೂವರು ನಾಯಕ ನಟರು ಮತ್ತು ನಾಯಕಿಯರ ಅಭಿನಯ ಎಲ್ಲೂ ಬೋರ್ ಮಾಡದೆ ಇಷ್ಟವಾಗುತ್ತೆ.ಕೋರ್ಟ್ ನಲ್ಲಿ ನಡೆಯುವ ವಾದ-ವಿವಾದ ಟಿವಿಯಲ್ಲಿ ಪ್ರಸಾರವಾಗುವುದು ಲಾಜಿಕ್ ಗೆ ತುಂಬ ದೂರವಾದದು. ಸೆಲೆಬ್ರಿಟಿ ಆಗ್ಬೇಕು ಅಂದ್ರೆ ತಪ್ಪು ಮಾಡ್ಬೇಕು ಎಂಬ ತಪ್ಪು ಕಲ್ಪನೆ ಕಥೆಯಲ್ಲಿದೆ. ಕೋರ್ಟ್ ಸನ್ನಿವೇಶದಲ್ಲಿ ಹೇಳುವ ಡೈಲಾಗ್ ಗಳು ಸಾಮಾನ್ಯವೆನಿಸುತ್ತೆ. ಆರಂಭದಲ್ಲಿದ್ದ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್ ನಲ್ಲಿ ಕಾಣಲಿಲ್ಲ.

uppi huli khaara is a directional venture of choreographer imran sardaria . Here is our take about the movie. Watch the video to know if the movie is worth a watch
Recommended