ಅಂಜನೀಪುತ್ರ ಆಡಿಯೋ ಕ್ವಿಕ್ ರೌಂಡ್ ಅಪ್: ಮಂಡ್ಯ, ಹುಬ್ಬಳ್ಳಿ ಫ್ಯಾನ್ಸ್ ಗಿದೆ ಸರ್ಪೈಸ್ | Filmibeat Kannada

  • 6 years ago
'ಅಂಜನೀಪುತ್ರ'... ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ. ಸಾಕಷ್ಟು ವಿಶೇಷಗಳಿಂದ ಕೂಡಿರುವ 'ಅಂಜನೀಪುತ್ರ' ಸಿನಿಮಾದ ಹಾಡುಗಳು ಇಂದು (ನವೆಂಬರ್ 24)ರಂದು ಬಿಡುಗಡೆ ಆಗುತ್ತಿದೆ. ಅಪ್ಪು ಅಭಿಮಾನಿಗಳಿಗಿಂದು 'ಡಬಲ್ ಧಮಾಕ'. ಒಂದ್ ಕಡೆ ಆಡಿಯೋ ಕಂಪನಿ ಮತ್ತೊಂದು ಕಡೆ 'ಅಂಜನೀಪುತ್ರ' ಹಾಡುಗಳು ಮತ್ತು 'ಟ್ರೇಲರ್' ಕೂಡ ಲಾಂಚ್ ಆಗ್ತಿದೆ. ಸಂಜೆ ಬಿಡುಗಡೆಯಾಗುವ ಹಾಡುಗಳು ಹೇಗಿವೆ.? ಸಿನಿಮಾದಲ್ಲಿ ಯಾರೆಲ್ಲಾ ಹಾಡಿದ್ದಾರೆ.? ಎನ್ನುವುದರ ಬಗ್ಗೆ ಇಲ್ಲಿದೆ ಕ್ವಿಕ್ ರೌಂಡ್ ಅಪ್..ಪ್ರತಿಯೊಬ್ಬರಿಗೂ ಆಸೆಗಳಿರುತ್ತೆ. ಅದೇ ರೀತಿ ಸಂಗೀತ ನಿರ್ದೇಶಕ 'ರವಿ ಬಸ್ರೂರ್' ರವರಿಗೂ ಪವರ್ ಸ್ಟಾರ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಬೇಕು ಎನ್ನುವ ಆಸೆಯಿತ್ತಂತೆ. ಅದು ಈಗ 'ಅಂಜನೀಪುತ್ರ' ಸಿನಿಮಾದಿಂದ ನನಸಾಗಿದೆ. ಪುನೀತ್ ರಾಜ್ ಕುಮಾರ್ ರ ಸಿನಿಮಾಗೆ ಮೊದಲ ಬಾರಿಗೆ 'ರವಿ ಬಸ್ರೂರು' ಸಂಗೀತ ನಿರ್ದೇಶನ ಮಾಡಿದ್ದಾರೆ.'ಅಂಜನೀಪುತ್ರ' ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಒಂದು ಹಾಡನ್ನ ಹಾಡಿದ್ದಾರೆ. 'ರಾಜಕುಮಾರ' ಸಿನಿಮಾದ ನಂತರ ಪವರ್ ಸ್ಟಾರ್ ಅವರ ಮತ್ತೊಂದು ಹಾಡು ಸಖತ್ ವೈರಲ್ ಆಗುವ ಸೂಚನೆ ಇದೆ. 'ಒನ್ ಟು ಥ್ರೀ ಫೋರ್' ಅಂತ ಸ್ಟಾರ್ಟ್ ಆಗುವ ಈ ಹಾಡನ್ನ 'ವಿ ನಾಗೇಂದ್ರ ಪ್ರಸಾದ್' ಬರೆದಿದ್ದಾರೆ.

Puneeth Rajkumar starrer 'Anjani Putra' Audio quick round up.Puneeth Rajkumar's 'PRK Audio' label opens with 'Anjaniputra' movie,"anjaniputhra" is the milestone movie for punith rajkumar , do you know the reason,. watch this video

Recommended