ಪುನೀತ್ ಫ್ಯಾಮಿಲಿಯಲ್ಲಿ ಯಾರ ಸ್ವಭಾವ ಹೇಗೆ? ಅಪ್ಪು ಬಿಚ್ಚಿಟ್ಟ ಸಂಗತಿ | Filmibeat Kannada

  • 6 years ago
'ಕನ್ನಡ ರಾಜರತ್ನ' ಪುನೀತ್ ರಾಜ್ ಕುಮಾರ್ ಕಿರುತೆರೆಗೆ ಕಾಲಿಟ್ಟಿದ್ದು, ಈ ವಾರದಿಂದ ಪುನೀತ್ ನಿರೂಪಣೆ ಮಾಡಿಕೊಡಲಿರುವ 'ಫ್ಯಾಮಿಲಿ ಪವರ್' ಕಾರ್ಯಕ್ರಮ ಆರಂಭವಾಗಲಿದೆ. ಇದೊಂದು ಪಕ್ಕಾ ಫ್ಯಾಮಿಲಿ ಗೇಮ್ ಶೋ ಆಗಿದೆ. ಹಾಗಿದ್ರೆ, ಪುನೀತ್ ಫ್ಯಾಮಿಲಿ ಬಗ್ಗೆ ನಿಮಗೆಷ್ಟು ಗೊತ್ತು? ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಯಾರು ಹೇಗಿರುತ್ತಾರೆ? ಪಾರ್ವತಮ್ಮ ಅವರಿಗೆ ಅಪ್ಪು ಕಂಡ್ರೆ ಯಾಕೆ ಅಷ್ಟೊಂದು ಇಷ್ಟ? ಈ ಎಲ್ಲ ಕುತೂಹಲಗಳಿಗೆ ಸ್ವತಃ ಪವರ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ. 'ಫ್ಯಾಮಿಲಿ ಪವರ್' ಶೋನವರು ಪುನೀತ್ ಅವರ ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಪುನೀತ್ ತಮ್ಮ ಫ್ಯಾಮಿಲಿ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ..''ತುಂಬ ಇಷ್ಟ ಪಟ್ಟು ಮಾಡುವ ಹಬ್ಬ ದಸರಾ. ನಾವು ಬಳಸುವ ಎಲ್ಲ ವಸ್ತುಗಳನ್ನ ಅಂದವಾಗಿ ಒಂದೆಡೆ ಶೃಂಗಾರ ಮಾಡಿ, ಸಂಪ್ರದಾಯವಾಗಿ ಪೂಜೆ ಮಾಡುವುದು. ದೀಪಾವಳಿ ಅಂದ್ರೆನೂ ಇಷ್ಟ''''ನಾನು ಯಾವತ್ತು ಮಕ್ಕಳನ್ನ ಬೈಯ್ದಿಲ್ಲ, ರೇಗಾಡಿಲ್ಲ. ಸಣ್ಣ ಪುಟ್ಟ ದೂರುಗಳು ಬರುತ್ತೆ. ಆದ್ರೆ, ಯಾವಾಗಲೂ ಖುಷಿ ಖುಷಿ ಇರಬೇಕು. ಜಾಸ್ತಿ ತಲೆಕೆಡಿಸಿಕೊಳ್ಳಬಾರದು.'' ''ನಮ್ಮ ಮನೆಯಲ್ಲಿ ಜನರಲ್ ನಾಲೆಡ್ಜ್ ಅಂದ್ರೆ, ಅದು ನಮ್ಮ ವೈಫ್. ಅವರು ಹೆಚ್ಚಾಗಿ ಪೇಪರ್ ಓದುತ್ತಾರೆ. ತುಂಬ ಹರಟೆ ಹೊಡೆಯುವುದು ಅಂದ್ರೆ ನಾನೇ. ಅಂದ್ರೆ, ಮನೆಯವರು, ಫ್ಯಾಮಿಲಿ ಜೊತೆ ಮಾತನಾಡುವಾಗ ಅಷ್ಟೆ'' - ಪುನೀತ್ ತಾಜ್ ಕುಮಾರ್, ನಟ


Power Star Puneet Rajkumar shares his family's sweet memories in Family Power Show Promo. watch this video

Recommended