ಜಮೀರ್ ಅಹಮದ್ ಖಾನ್ ಕನ್ನಡದ ಭಾಷಣಕ್ಕೆ ಗಹ ಗಹಿಸಿ ನಕ್ಕ ಜನರು | Oneindia Kannada

  • 7 years ago
JDS rebel MLA from Chamarajpet (Bengaluru) Zameer Ahmed Khan, wrongly pronounced Ksheera Bhagya Plan. In a speech in Nagamangala Taluk in Mandya district, Zameer, instead of pronounce Ksheera Bhagya, he said Sheela Bhagya.


ಜಮೀರ್ ಅಹಮದ್ ಕನ್ನಡ ಭಾಷಣಕ್ಕೆ ಗಹಗಹಿಸಿ ನಕ್ಕ ನಾಗಮಂಗಲ! ಜೆಡಿಎಸ್ ಭಿನ್ನಮತೀಯ ಶಾಸಕ, ಚಾಮರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುವ ಜಮೀರ್ ಅಹಮದ್ ಖಾನ್ ಅವರನ್ನು ಕಾಂಗ್ರೆಸ್ ಒಳಗೆ ಬಿಟ್ಟುಕೊಳ್ಳುತ್ತೋ ಇಲ್ಲವೋ, ಜಮೀರ್ ಮಾತ್ರ ಹೋದಲೆಲ್ಲಾ, ಸಿದ್ದರಾಮಯ್ಯನವರನ್ನು ಹೊಗಳಿದ್ದೇ ಹೊಗಳಿದ್ದು.ಹೊಗಳಲಿ.. ಅದು ಅವರವರ ವೈಯಕ್ತಿಕ ಪಕ್ಷ ಅಥವಾ ವ್ಯಕ್ತಿನಿಷ್ಠೆಯ ವಿಚಾರ. ಆದರೆ, ಜಮೀರ್ ಭಾಯ್.. ಕನ್ನಡದಲ್ಲಿ ಮಾಡಿದ ಭಾಷಣ ಕೇಳಿ.. ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ .. ಅವರಿಗೊಂದು 'ಉಮ್ಮಾ..' ಕೊಡೋಣ ಅಂದೆನಿಸಿದರೆ ತಪ್ಪಿಲ್ಲಾ..ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ, ಕೆಂಪೇಗೌಡ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜಮೀರ್, ನಮ್ಮ ಮುಖ್ಯಮಂತ್ರಿಗಳು ಮಾಡಿದ ಒಳ್ಳೆ ಕೆಲಸ ಒಂದಾ..ಎರಡಾ.. ಅನ್ನಭಾಗ್ಯ, ಶೀಲಭಾಗ್ಯ, ಶೂಭಾಗ್ಯ ಇರಲಿ..ಹೀಗೆ ಬಹಳಷ್ಟು ಒಳ್ಳೆ ಕೆಲಸವನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಜಮೀರ್ ಹೊಗಳಿದ್ದಾರೆ.

Recommended