ನಿಜಾ ಕಣ್ರೀ ದ್ರುವ ಅವ್ರು ಇನ್ ೬ ವರ್ಷ ಫುಲ್ ಬ್ಯುಸಿ

  • 7 years ago
ಧ್ರುವ ಸರ್ಜಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಓಡುವ ಕುದುರೆ ಅಂದ್ರೆ ತಪ್ಪಿಲ್ಲ. 'ಅದ್ದೂರಿ', 'ಬಹದ್ದೂರ್', 'ಭರ್ಜರಿ'... ಹೀಗೆ ಮೂರು 'ಹ್ಯಾಟ್ರಿಕ್ ಹಿಟ್' ನೀಡಿರುವ ಧ್ರುವ ಸರ್ಜಾ ಸದ್ಯ ಸಖತ್ ಬ್ಯುಸಿ ಆಗಿರುವ ನಾಯಕ ನಟ. ಈಗಿನ ಯಂಗ್ ಜನರೇಷನ್ ಗಳಿಗೆ ಬೇಕಾಗುವಂತೆ ಧ್ರುವ ಸರ್ಜಾ ಪರ್ಫಾಮೆನ್ಸ್ ನೀಡುತ್ತಿರುವುದರಿಂದ ಅನೇಕ ಯುವಕರು ಧ್ರುವ ಸರ್ಜಾ ಫ್ಯಾನ್ ಆಗಿದ್ದಾರೆ.ಮೂರಿ ಸಿನಿಮಾಗಳ ಯಶಸ್ಸು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿದೆ. ಹಾಕಿರುವ ಹಣಕ್ಕಿಂತ ದುಪ್ಪಟ್ಟು ಹಣವನ್ನ ಮೂರು ಚಿತ್ರಗಳು ಗಳಿಸಿರೋದ್ರಿಂದ ಕನ್ನಡ ಸಿನಿಮಾರಂಗದ ದೊಡ್ಡ ದೊಡ್ಡ ನಿರ್ಮಾಪಕರು ಧ್ರುವ ಸರ್ಜಾ ಡೇಟ್ಸ್ ಗಾಗಿ ಕಾದಿದ್ದಾರೆ. ಎಲ್ಲರಿಗೂ ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ಕೊಟ್ಟರೆ, ಇನ್ನೂ ಆರು ವರ್ಷ ಧ್ರುವ ಸಖತ್ ಬಿಜಿ. ಹಾಗಾದ್ರೆ, ಧ್ರುವ ಸರ್ಜಾ ಲಿಸ್ಟ್ ನಲ್ಲಿರುವ ಆ ನಿರ್ಮಾಪಕರು ಯಾರು.ಭರ್ಜರಿ' ಸಿನಿಮಾದ ನಂತ್ರ ಧ್ರುವ ಸರ್ಜಾ ಮೊದಲು ಆಕ್ಟ್ ಮಾಡ್ತಿರೋದು 'ಪೊಗರು' ಸಿನಿಮಾದಲ್ಲಿ, 'ಭರ್ಜರಿ' ರಿಲೀಸ್ ಗೂ ಮುನ್ನವೇ ಕಮಿಟ್ ಆಗಿರೋ ಸಿನಿಮಾ ಇದಾಗಿದ್ದು, ಈಗಾಗಲೇ ಚಿತ್ರ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಿದೆ. 'ಬಿ ಕೆ ಗಂಗಾಧರ್' ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.'ಬಚ್ಚನ್' ಸಿನಿಮಾ ನಿರ್ಮಾಣ ಮಾಡಿ ಕನ್ನಡ ಸಿನಿಮಾರಂಗದಲ್ಲಿ ಒಳ್ಳೆ ನಿರ್ಮಾಪಕ ಎನ್ನಿಸಿಕೊಂಡಿರುವ ನಿರ್ಮಾಪಕ ಉದಯ್.ಕೆ.ಮೆಹ್ತಾರ ಬಳಿ ಇದೆ ಧ್ರುವ ಸರ್ಜಾ ಡೇಟ್ಸ್. ಕತೆ ಮತ್ತು ನಿರ್ದೇಶಕರ ಹುಡುಕಾಟ ಪ್ರಾರಂಭವಾಗಿದ್ದು ನಂದಕಿಶೋರ್ ಸಿನಿಮಾ ನಂತರ ಧ್ರುವ ಸರ್ಜಾ ಮೆಹ್ತಾ ಬ್ಯಾನರ್ ನಲ್ಲಿ ನಟಿಸಲಿದ್ದಾರೆ.

druva is one of the best actor in kannada film industry , he is giving a such a wonderful movies, druva surja next this 6 years full busy schedule,. watch this video

Recommended