ಪ್ರದ್ಯುಮನ್ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿಷಯಗಳು | Oneindia Kannada

  • 7 years ago
The 16-year-old accused in the gruesome murder of Pradyuman Thakur in Ryan International School in Gurgaon has given chilling information about how he killed the innocent student. He wanted to kill him using poison. But, last minute decided to slash Pradyuman.


ಪ್ರದ್ಯುಮನ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು. ಶೌಚಾಲಯಕ್ಕೆಂದು ಬಂದಿದ್ದ ಎರಡನೇ ತರಗತಿಯಲ್ಲಿ ಓದುತ್ತಿದ್ದ ಪ್ರದ್ಯುಮ್ನನನ್ನು ಹದಿನಾರು ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿ ಹತ್ಯೆಗೈದಿದ್ದು ಅಚಾನಕ್ಕಾಗಿ ಅಲ್ಲ. ಆತ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ನೀಡುತ್ತಿರುವ ಒಂದೊಂದು ಹೇಳಿಕೆಗಳೂ ಬೆಚ್ಚಿ ಬೀಳಿಸುವಂತಿವೆ. ಕೊಲೆ ಮಾಡಲು ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮೊದಲೇ ಪ್ಲಾನ್ ಮಾಡಿದ್ದ. ಪ್ರದ್ಯುಮ್ನ ತನಗೆ ಮೊದಲೇ ಪರಿಚಿತನಾಗಿದ್ದರಿಂದ ಹಂತಕನಿಗೆ ಕೊಲೆಗೈಯುವುದು ಸರಳವಾಗಿತ್ತು. ಈ ಕ್ರೌರ್ಯಕ್ಕೆ ಆತ ಮಾಡಿಕೊಂಡ ಸಿದ್ಧತೆಯಿದೆಯಲ್ಲ ಅದು ಮೈನಡುಗಿಸುವಂತಿವೆ.ರಯನ್ ಇಂಟರ್ನ್ಯಾಷನಲ್ ಶಾಲೆಯ ಪರೀಕ್ಷೆಯನ್ನು ಮುಂದೂಡುವಂತೆ ಮಾಡುವುದು ಆತನ ಪ್ರಥಮ ಆದ್ಯತೆಯಾಗಿತ್ತು. ಜೊತೆಗೆ ಓದಿನಲ್ಲಿ ಹಿಂದಿದ್ದರಿಂದ ಪಾಲಕರ ಮತ್ತು ಶಿಕ್ಷಕರ ಭೇಟಿಯನ್ನು ಕೂಡ ತಪ್ಪಿಸಿಕೊಳ್ಳುವುದು ಆತನ ಇರಾದೆಯಾಗಿತ್ತು. ಅದಕ್ಕಾಗಿ ಆತ ಆಯ್ದುಕೊಂಡಿದ್ದು ಪಿಯಾನೋ ಕ್ಲಾಸಿಗೆ ಜೊತೆಯಾಗಿ ಹೋಗುತ್ತಿದ್ದ ಪ್ರದ್ಯುಮ್ನನನ್ನು.

Recommended