ಈ ವಾರದ ಮಹಿಳಾ ಸಾಧಕಿ : ಶ್ರೀಲಕ್ಷ್ಮಿ | Oneindia Kannada

  • 7 years ago
'ಶೈಕ್ಷಣಿಕ ದತ್ತು' ಎಂಬ ವಿನೂತನ ಯೋಜನೆಗೆ ನಾಂದಿ ಹಾಡಿದ 'ಮಿಂಚು' "ಕಲಿಕೆ ಎಂಬುದು ಪಠ್ಯವನ್ನು ಒತ್ತಡದಿಂದ ಮಕ್ಕಳ ತಲೆಗೆ ತುಂಬುವ ಕಾಯಕವಾಗದೆ, ಅದೊಂದು ಕ್ರಿಯಾಶೀಲ ಕಾರ್ಯವಾಗಬೇಕು, ಕಲಿಕೆ ಎಂಬುದು ಮಗುವನ್ನು ಜವಾಬ್ದಾರಿಯುತ ಪ್ರಜೆಯನ್ನಾಗಿಸುವ ಯಜ್ಞವಾಗಬೇಕು." ಇದೇ ಉದ್ದೇಶವನ್ನಿಟ್ಟುಕೊಂಡು ಮಕ್ಕಳಿಗೆ ಪಾಠವನ್ನು ಕಲಿಸುವಲ್ಲಿ ಒಂದು ಸೃಜನಾತ್ಮಕ ಮಾಧ್ಯಮವನ್ನು ಹುಡುಕಿಕೊಂಡವರು ಸಾ.ನಾ.ಶ್ರೀಲಕ್ಷ್ಮಿ.ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಶ್ರೀರಾಮಪುರ ಎಂಬ ಕುಗ್ರಾಮದವರಾದ ಶ್ರೀಲಕ್ಷ್ಮಿ ಅವರು, ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲೇ ಓದಿದವರು. ಅದಕ್ಕೆಂದೇ ಕನ್ನಡ ಮಾಧ್ಯಮದಲ್ಲೇ ಓದುತ್ತಿರುವ, ಸರ್ಕಾರಿ ಶಾಲೆಯ ಮಕ್ಕಳೆಂದರೆ ಅವರಿಗೆ ಎಲ್ಲಿಲ್ಲದ ಆಸ್ಥೆ.ಎಚ್ ಎ ಎಲ್ ಉದ್ಯೋಗಿಯಾಗಿದ್ದ ಎಂ.ವಿಜಯ ಕುಮಾರ್ ಎಂಬುವವರನ್ನು ಮದುವೆಯಾದ ಶ್ರೀಲಕ್ಷ್ಮಿ ಅಂದಿನಿಂದ ಬೆಂಗಳೂರಿನಲ್ಲೇ ನೆಲೆಕಂಡುಕೊಂಡವರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸವಾಗಿರುವ ಇವರದು ಪತಿ, ಇಬ್ಬರು ಮಕ್ಕಳ ಪುಟ್ಟ, ಸುಖೀ ಕುಟುಂಬ.
Shreelakshmi a woman, basically from Chitradurga stays in Bengaluru, involves in many social works with a non profit organization Minchu. She also contributes many poor children from government school by educational adoption. She is our woman achiever of the week.

Recommended