ಟಿಪ್ಪು ಜಯಂತಿ 2017 : ಗೋಕರ್ಣ ದೇವಸ್ಥಾನಕ್ಕೂ ಟಿಪ್ಪು ಸೇವೆ ಸಲ್ಲಿಸಿದ್ದಾರೆ | Oneindia Kannada

  • 6 years ago
ಗೋಕರ್ಣ ಕ್ಷೇತ್ರಕ್ಕೂ ಟಿಪ್ಪು ಸುಲ್ತಾನ್ ಗೌರವ ಸಲಾಂ, ಹೀಗೊಂದು ಇತಿಹಾಸ. 'ಪ್ರಸಿದ್ಧ ಪ್ರವಾಸಿ ತಾಣ, ಶಿವನ ಪ್ರಾಣಲಿಂಗ ಇರುವ ಉತ್ತರ ಕನ್ನಡದ ಗೋಕರ್ಣ ಕ್ಷೇತ್ರಕ್ಕೆ ಹಜರತ್ ಟಿಪ್ಪು ಸುಲ್ತಾನ್ ಕೊಡುಗೆ ನೀಡಿದ್ದಾನೆ' ಎಂಬುದು ಟಿಪ್ಪು ಜಯಂತಿ ಆಚರಣೆ ಪರ- ವಿರೋಧದ ಚರ್ಚೆಗಳ ನಡುವೆ ಸ್ಥಳೀಯವಾಗಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿ ಕೂಡ ಮಾಡಿದ್ದು, ಟಿಪ್ಪುವಿನ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿದ್ದ ಅಂದಿನ ಗೋಕರ್ಣ ಸಂಸ್ಥಾನವನ್ನು ಕಬಳಿಸಲು ತನ್ನ ಸೈನಿಕರಿಗೆ ಟಿಪ್ಪು ತಿಳಿಸಿದ್ದನಂತೆ. ಆತನ ಆಜ್ಞೆಯಂತೆ ಸೈನಿಕರು ದಾಳಿ ಮಾಡಿ, ಇಲ್ಲಿನ ಪುರಾಣ ಪ್ರಸಿದ್ಧ ಕೆಲವು ದೇವಾಲಯಗಳ ಮೂರ್ತಿಗಳನ್ನು ಕೊಂಚ ಭಗ್ನ ಮಾಡಿದ್ದರಂತೆ.ಅದೇ ದಿನ ಟಿಪ್ಪುವಿಗೆ ಹಾಗೂ ಆತನ ಸೇನಾಪತಿಗೆ ಕನಸಿನಲ್ಲಿ ಶಿವ ಬಂದು ಕಾಡತೊಡಗಿದ್ದನಂತೆ. ಇದರಿಂದ ಭಯಗೊಂಡ ಟಿಪ್ಪು ಮರುದಿನವೇ ಕ್ಷೇತ್ರಕ್ಕೆ ಬಂದು, ದೇವರಲ್ಲಿ ಕ್ಷಮೆ ಯಾಚಿಸಿದನೆಂದು ಹೇಳಲಾಗುತ್ತದೆ. ಬಳಿಕ ಭಗ್ನಗೊಳಿಸಿದ್ದ ಮೂರ್ತಿಗಳನ್ನು ಪುನರ್ ಪ್ರತಿಷ್ಠಾಪಿಸಲು ಸಂಕಲ್ಪಿಸಿದನಂತೆ.ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ ಗೋಕರ್ಣದ ಮಹಾಗಣಪತಿ ಸಹಿತ ಮುಖ್ಯ ದೇವರಿಗೆ ಗೌರವಪೂರ್ವಕವಾಗಿ 'ಸಲಾಂ' (ಗೌರವ ವಂದನೆ) ಅನ್ನು ನೀಡಿ, ಕಪ್ಪ ಕಾಣಿಕೆ ಸಲ್ಲಿಸಿದನೆಂದು ಹೇಳಲಾಗುತ್ತದೆ.
Tippu Sultan contributed his services to Gokarna temple also. There is a discussion going on in Gokarna local news papers. Quiet interesting history revealed.

Recommended