ಶಿವಣ್ಣ, ಶ್ರೀಮುರಳಿ ಜೋಡಿಯ 'ಮಫ್ತಿ' ಬಿಡುಗಡೆಯ ದಿನಾಂಕ ನಿಗದಿ

  • 7 years ago
ಟ್ರೇಲರ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸುತ್ತಿರುವ 'ಮಫ್ತಿ' ಸಿನಿಮಾದ ಬಿಡುಗಡೆಯ ದಿನಾಂಕ ಇದೀಗ ನಿಗದಿ ಆಗಿದೆ. ಸಿನಿಮಾವನ್ನು ಇದೇ ಡಿಸೆಂಬರ್ ತಿಂಗಳಿನಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ. ಗಾಂಧಿನಗರದಲ್ಲಿ 'ಮಫ್ತಿ' ಸಿನಿಮಾ ಈಗಾಗಲೇ ದೊಡ್ಡ ಹೈಪ್ ಸೃಷ್ಟಿ ಮಾಡಿದೆ. ಶಿವಣ್ಣ ಮತ್ತು ಶ್ರೀಮುರಳಿ ಜೋಡಿ ಎನ್ನುವ ಕಾರಣಕ್ಕೆ ಚಿತ್ರದ ನಿರೀಕ್ಷೆ ಡಬಲ್ ಆಗಿದೆ. ಇನ್ನು ಟ್ರೇಲರ್ ಬಂದ ಮೇಲಂತೂ ಚಿತ್ರದ ಅಸಲಿ ಖದರ್ ತಿಳಿಯಿತು. ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡುವ ಬಯಕೆ ಹುಟ್ಟಿಕೊಂಡಿತ್ತು. ನರ್ತನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಶ್ರೀಮುರಳಿ ಜೊತೆ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದಾರೆ. ಅಂದಹಾಗೆ, 'ಮಫ್ತಿ' ಸಿನಿಮಾ ಡಿಸೆಂಬರ್ 1ಕ್ಕೆ ಬಿಡುಗಡೆಯಾಗಲಿದ್ದು, ಬರೋಬ್ಬರಿ 300ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಲಿದೆ. .

Here is the Releasing date of shree muruli and shivanna's movie "mufti" ,,.watch this video

Recommended