ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆಗೆ? | Oneindia kannada

  • 7 years ago
ತುಮಕೂರು, ನವೆಂಬರ್ 06 : ನಡೆದಾಡುವ ದೇವರೇಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರಲಿದೆ. ಸಿದ್ದಗಂಗಾ ಶ್ರೀಗಳ ಆಧ್ಯಾತ್ಮಿ ಹಾಗೂ ಸಮಾಜ ಸೇವಾಕಾರ್ಯಗಳನ್ನು ಅಂಕಿ ಅಂಶ ಸಮೇತ ಸಿದ್ದಗಂಗಾ ಮಠದ ನಿವೃತ್ತ ಪ್ರಾಂಶುಪಾಲರೊಬ್ಬರು ಸಂಗ್ರಹಿಸಿದ್ದು ಅವುಗಳನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕೆಲವೇ ದಿಗಳಲ್ಲಿ ಸಲ್ಲಿಸಲಿದ್ದಾರೆ.ಮಠದಲ್ಲೇ ಹಲವು ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಶ್ರೀಗಳ ಬಗ್ಗೆ ಮಹತ್ವಪೂರ್ಣ ಹಾಗೂ ಆಸಕ್ತಿಕರ ಸಂಗತಿಗಳನ್ನು ಕಲೆ ಹಾಕಿದ್ದು ಗಿನ್ನೆಸ್ ದಾಖಲೆಗೆ ನೀಡಲು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಚಂದ್ರಶೇಖರಯ್ಯ ಕಲೆ ಹಾಕಿರುವ ಅಂಕಿ ಅಂಶ ಹೀಗಿವೆ.ಶ್ರಿಗಳು ದೀಕ್ಷೆ ಪಡೆದು 88 ವರ್ಷಗಳಾಗಿವೆ, ದಿನದಲ್ಲಿ ಮೂರು ಬಾರಿ ತಪ್ಪದೇ ಶಿವಪೂಜೆ ಮಾಡುವ ಅವರು 88 ವರ್ಷಗಳಲ್ಲಿ ಅವರು 96,426 ಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿದ್ದಾರೆ. ಬಹುಷಾ ಶ್ರೀಗಳಷ್ಟು ಶಿವಾರಾಧನೆ ಮಾಡಿರುವವರು ಸದ್ಯದ ಪರಿಸ್ಥಿತಿಯಲ್ಲಿ ಯಾಊ ಇಲ್ಲವೇನೊ.
ಶ್ರೀಗಳು ಪ್ರತಿದಿನ 6 ಗಂಟೆ ಧ್ಯಾನ ಮತ್ತು ಪೂಜೆಯಲ್ಲಿ ತಪ್ಪದೆ ತಮ್ಮನ್ನು ತೊಡಗಿಕೊಳ್ಳುತ್ತಾರೆ ಅಂದರೆ ಸುಮಾರು 1.89.930ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆ ಮಾಡಿದ್ದಾರೆ . 14 ಗಂಟೆ ಸಮಾಜ ಸೇವೆಯಲ್ಲಿ ತೊಡಗುವ ಶ್ರೀಗಳು ಇಲ್ಲಿಯವರೆಗೆ 4,49,680 ಗಂಟೆಗಳ ಕಾಲ ಸಮಾಜ ಸೇವೆಗೈದಿದ್ದಾರೆ
Siddaganga Shree's name is in gunnies record? watch this video

Recommended