ಅರ್ಧ ಶತಕ ಬಾರಿಸಿದ 'ಭರ್ಜರಿ' ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ? | Filmibeat Kannada

  • 7 years ago
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಇವತ್ತಿಗೆ ಅರ್ಧ ಶತಕ ಪೂರೈಸಿದೆ. ಧ್ರುವ ಪರ್ಫಾಮೆನ್ಸ್ ನೋಡಿದ ಸಿನಿಮಾ ಪ್ರೇಕ್ಷಕ ಚಿತ್ರಕ್ಕೆ ಜೈಕಾರ ಹಾಕಿದ್ದ. ಎರಡು ವರ್ಷಗಳು ತಡವಾಗಿ ಬಂದರೂ ಕೂಡ ಸಿನಿಮಾವನ್ನ ಪ್ರೀತಿಯಿಂದಲೇ ಸ್ವೀಕರಿಸಿದ ಕನ್ನಡ ಸಿನಿಮಾ ಅಭಿಮಾನಿಗಳು 'ಭರ್ಜರಿ' ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸನ್ನ ತಂದುಕೊಟ್ಟಿದ್ದಾರೆ.ರಿಲೀಸ್ ಆದ ದಿನದಿಂದ ಹಿಡಿದು ಇಂದಿನವರೆಗೂ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡಿದ್ಯಂತೆ 'ಭರ್ಜರಿ' ಸಿನಿಮಾ. ಮಲ್ಟಿಫ್ಲೆಕ್ಸ್ ನಲ್ಲಿ ಮಾತ್ರವಲ್ಲದೆ ಬಿ ಹಾಗೂ ಸಿ ಸೆಂಟರ್ ಗಳಲ್ಲಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಉತ್ತರಕರ್ನಾಟಕದ ಭಾಗದ ಚಿತ್ರಮಂದಿರಗಳಲ್ಲಿ ಇಂದಿಗೂ 'ಭರ್ಜರಿ' ಹೌಸ್ ಫುಲ್ ಆಗಿ ಓಡ್ತಿದೆ ಅನ್ನೋದು ಸ್ಪೆಷಲ್.ಸಾಕಷ್ಟು ಕಾರಣಗಳಿಂದ 'ಭರ್ಜರಿ' ಸಿನಿಮಾ ಲೇಟ್ ಆದರೂ ಲೇಟೆಸ್ಟ್ ಆಗಿ ಬಂದಿದೆ. ಈಗಿನ ಜನರೇಷನ್ ಗೆ ಬೇಕಿದ್ದ ಎಲ್ಲಾ ಕಂಟೆಂಟ್ ಸಿನಿಮಾದಲ್ಲಿ ಇರೋದ್ರಿಂದ ಪ್ರೇಕ್ಷಕರು ಚಿತ್ರವನ್ನ ಇಷ್ಟ ಪಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಸ್ಟೈಲ್ ಆಫ್ ಮೇಕಿಂಗ್ ಮತ್ತೆ ವರ್ಕ್ ಆಗಿದೆ.

Actor Prince Dhruv Sarja's 'Bharjari' cinema has hit half-centuries today.Kannada Movie 'Bharjari' enters Box Office & has collected around 69 crore (Gross Collection) in 50 days . Here is the complete report in the video..watch this video

Recommended