ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

  • 7 years ago
ದಿ ವಿಲನ್' ಸಿನಿಮಾದ ಒಂದು ಹಾಡಿಗೆ ಎರಡು ಕೊಟಿ ಖರ್ಚು ಮಾಡುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಕೇಳಿ ಬಂದಿತ್ತು. ಆದರೆ ಈಗ ಅದೇ ರೀತಿ ಮತ್ತೊಂದು ಅದ್ದೂರಿ ಹಾಡನ್ನು 'ಕುರುಕ್ಷೇತ್ರ' ಸಿನಿಮಾದಲ್ಲಿಯೂ ಮಾಡಲಾಗುತ್ತಿದೆ. 'ಕುರುಕ್ಷೇತ್ರ' ಸಿನಿಮಾದ ಒಂದು ಹಾಡಿಗೆ ಒಂದು ಕೋಟಿ ರೂಪಾಯಿಯನ್ನು ನಿರ್ಮಾಪಕ ಮುನಿರತ್ನ ಸುರಿದಿದ್ದಾರೆ. ಅಭಿಮನ್ಯು ಮತ್ತು ಉತ್ತರೆ ನಡುವೆ ನಡೆಯುವ ಈ ಹಾಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಾಡಿನಲ್ಲಿ ನಿಖಿಲ್ ಕುಮಾರ್ ಮತ್ತು ನಟಿ ಅದಿತಿ ಆರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಲ್ಕು ಬೇರೆ ಬೇರೆ ರೀತಿಯ ಸೆಟ್ ಹಾಕಿ, ಆರು ಕ್ಯಾಮರಾಗಳಲ್ಲಿ ಈ ಹಾಡನ್ನು ಸೆರೆಯಿಡಿಯಲಾಗುತ್ತಿದೆ.ತೆಲುಗಿನ ಕೋರಿಯೊಗ್ರಾಫರ್ ಶೇಖರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಎರಡು ದಿನಗಳ ಕಾಲ ಈ ಹಾಡಿನ ಚಿತ್ರೀಕರಣವನ್ನು ನಡೆಸಲಾಗುವುದಂತೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಡನ್ನು ಶೂಟ್ ಮಾಡಲಾಗುತ್ತಿದೆ.

The news that has been spending two crore for a song from 'The Villain' has been heard recently. But now, another loud song is being made in 'Kurukshetra'. Producer Muniratnam has poured Rs 1 crore to a song from 'Kurukshetra'. This song between Abhimanyu and Uttarey is being produced at a cost .watch this video

Recommended