ಟಿಪ್ಪು ಸುಲ್ತಾನ್ ಹೈದರಾಲಿಯ ಮಗ ಮೇಲಾಗಿ ಕನ್ನಡಿಗ | ಟಿಪ್ಪು ಜಯಂತಿಯನ್ನ ಆಚರಿಸೋಣ | Oneindia Kannada
  • 6 years ago
On the backdrop of Tippu Jayanti celebration decision by Karnataka state government, here is an opinion about Tippu Sultan history by Oneindia columnist Sa Raghunatha.

ಟಿಪ್ಪು ಜಯಂತಿ ಆಚರಣೆಗೆ ಪ್ರಬಲವಾದ ವಿರೋಧ ವ್ಯಕ್ತವಾಗುತ್ತಿರುವ ಸನ್ನಿವೇಶದಲ್ಲಿ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಸರಿಯೋ ತಪ್ಪೋ ಎಂಬುದು ಕೂಡ ನಾನು ಯೋಚಿಸಿಲ್ಲ. ಆದರೆ ಟಿಪ್ಪು ಇತಿಹಾಸವನ್ನು ಕಣ್ಣಳತೆಗೆ ಎಷ್ಟು ಸಿಗುತ್ತದೋ ಅಷ್ಟರ ಮಟ್ಟಿಗೆ ತಿಳಿದು, ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಹೆಚ್ಚಿನ ಅಧ್ಯಯನ ಮಾಡಿದವರು, ಇತಿಹಾಸ ತಜ್ಞರು ಈ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದರೆ ಅರಿವಿಗೊಂದಿಷ್ಟು ವಿಚಾರದ ಆಹಾರ ಸಿಕ್ಕಿತು ಎಂಬು ಹಿಗ್ಗು ನನ್ನದು. ಟಿಪ್ಪು 'ಸುಲ್ತಾನ' ಎಂಬುದನ್ನು ನೆನಪಿಸಿಕೊಂಡಂತೆಯೇ ಆತನ ತಂದೆ 'ಸೈನಿಕ'ನಾಗಿಯೇ ಉಳಿದ ಹೈದರಾಲಿಯನ್ನೂ ಒಮ್ಮೆ ನೆನೆಯದಿದ್ದರೆ ಅಪಚಾರವಾದೀತು.ಟಿಪ್ಪು ನಮ್ಮೆದುರಿನ 'ರೂಪ'ವಾದರೆ, ಅದನ್ನು ರೂಪಿಸಿದ ವ್ಯಕ್ತಿತ್ವ ಹೈದರಾಲಿಯದು. ಮೈಸೂರು ಅರಸರ ಬಗ್ಗೆ ಅಪಾರ ನಿಷ್ಠೆ ಹಾಗೂ ವಿಶ್ವಾಸ ಹೊಂದಿದ್ದ ಹೈದರಾಲಿಯಲ್ಲಿ ಮತ-ಧರ್ಮಗಳ ಉದ್ವೇಗ ಕಾಣುವುದಿಲ್ಲ. ತನ್ನ ಸಂತತಿಯನ್ನು ಅರಸೊತ್ತಿಗೆಯ ಮೇಲೆ ಹೇಗಾದರೂ ಕೂರಿಸಬೇಕು ಎಂಬ ಉದ್ವೇಗವೂ ಕಾಣುವುದಿಲ್ಲ.
Recommended