ಸಿದ್ದರಾಮಯ್ಯ ಒಬ್ಬ ಲೂಟಿಕೋರ ಎಂದ ಬಿ ಎಸ್ ಯಡಿಯೂರಪ್ಪ | Oneindia Kannada

  • 7 years ago
ಸಿಎಂ ಸಿದ್ದರಾಮಯ್ಯ ರಾಜ್ಯದ ಖಜಾನೆಯನ್ನು ಲೂಟಿ ಮಾಡುವ ಲೂಟಿಕೋರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ. ಮೈಸೂರು ಮಹಾರಾಜ ಮೈದಾನದಲ್ಲಿ ನಡೆಯುತ್ತಿರುವ ರೈತ ಸಮಾವೇಶವನ್ನು ಅ. 26 ರಂದು ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸಿದ್ದು ಯಾವುದೇ ಕಾಮಗಾರಿಯನ್ನು ಮನ ಬಂದ ರೀತಿಯಲ್ಲಿ ಯೋಜಿಸಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಸರ್ವನಾಶ ಮಾಡುತ್ತಿದ್ದಾರೆ. ಆರೋಪ ಸುಳ್ಳು ಎಂದಾದರೆ ಚಾಮರಾಜನಗರ ಜಿಲ್ಲೆಯ ಎಸ್ಟಿಮೇಟ್ ತೆಗೆದು ನೋಡಿ ಎಂದರು. ಮುಖ್ಯಮಂತ್ರಿಗಳು ಜನಹಿತವನ್ನು ಮರೆತಿದ್ದಾರೆ. ದೇವರು ಕ್ಷಮಿಸಿದರೂ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜನತೆ ಕ್ಷಮಿಸಬಾರದು.ಅಧಿಕಾರದ ಮದ, ಹಣದ ಮದ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲಬಹುದು ಎಂದುಕೊಂಡ ನಿಮಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮೂರೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಜ್ಯದ ಮುಖ್ಯಮಂತ್ರಿ ರೈತರ ಪಾಲಿಗೆ ಸತ್ತಿದ್ದೀರೋ ಬದುಕಿದ್ದೀರೋ ಎಂದು ಪ್ರಶ್ನಿಸಿದರಲ್ಲದೇ ಬಡವರಿಗೆ ನೀಡಿದ ಅಕ್ಕಿ ಗೋಧಿ ಕೊಳೆಯುತ್ತಿದೆಯಲ್ಲ. ಸಾವಿರಾರು ಕೋ.ರೂ.ಅಕ್ಕಿ ಗೋಧಿ ಕೊಳೆಯುತ್ತಿದೆ. ಜನಹಿತ ಮರೆತು ತುಘಲಕ್ ದರ್ಬಾರ್ ಮಾಡುತ್ತಿರುವ ಸಿಎಂ ಗೆ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.

Recommended