Veerappan's Ghost haunts Chamarajanagar | Oneindia Kannada
  • 7 years ago
Upakara colony in Chamarajanagara district which was once suffering by notorious dacoit Veerappan is now facing problems of lack of basic facility and infrastructure. Tribal people are expecting support from government.


ಸ್ವಾತಂತ್ರ್ಯ ಲಭಿಸಿ ಏಳು ದಶಕವಾಗಿದೆ. ಎಲ್ಲ ಕ್ಷೇತ್ರದಲ್ಲೂ ದೇಶ ಅಭಿವೃದ್ಧಿಯತ್ತ ಸಾಗಿದೆ. ಆದರೆ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಮಾತ್ರ ನನಸಾಗಿಲ್ಲ ಎಂಬುದಕ್ಕೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ 'ಉಪಕಾರ ಕಾಲೋನಿ' ಸಾಕ್ಷಿ. ಈ ಕಾಲೋನಿಯ ಹೆಸರು ಉಪಕಾರವಾಗಿದ್ದು, ಇಲ್ಲಿಗೊಮ್ಮೆ ತೆರಳಿದರೆ ಸರ್ಕಾರದ ಕಡೆಯಿಂದ ಯಾವುದೇ ಉಪಕಾರವಾಗಿಲ್ಲ ಎಂಬುದನ್ನು ಇಲ್ಲಿನ ಜನರು ಸಾಗಿಸುತ್ತಿರುವ ಶೋಚನೀಯ ಬದುಕು ಹೇಳುತ್ತದೆ.