Bigg Boss Season 5 Big House | Filmibeat Kannada

  • 7 years ago
Do You Ever Scene This Bigg Boss Season 5 Big House . Check out the video more information

ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಹಿಂದಿ, ಕನ್ನಡ, ತೆಲುಗು, ತಮಿಳು ಬಾಷೆಗಳಿಗೂ ವ್ಯಾಪಿಸಿದೆ. ಮೊನ್ನೆ ಮೊನ್ನೆ ತಾನೇ ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 1 ಪ್ರಾರಂಭವಾಗಿದೆ. ಇನ್ನು ತೆಲುಗಿನಲ್ಲಿ ಒಂದರ ಹಿಂದೆ ಒಂದು ಟೀಸರ್ ಗಳನ್ನು ರಿಲೀಸ್ ಮಾಡ್ತಾ ಇದ್ದಾರೆ.


ಆದರೆ ಕನ್ನಡದಲ್ಲಿ ಈಗ ಬಿಗ್ ಬಾಸ್ ಸೀಸನ್ 5 ತಯಾರಿ ನಡೆಯುತ್ತಿದೆ. ಈ ಬಾರಿ ಸೆಲೆಬ್ರೆಟಿಗಳ ಜೊತೆ ಸಾರ್ವಜನಿಕರಿಗೂ ಬಿಗ್ ಬಾಸ್ ಮನೆಯೊಳಗೆ ಅವಕಾಶ ನೀಡಲಾಗುತ್ತದೆಯಂತೆ. ಅದಕ್ಕಾಗಿ ಬಹಳಷ್ಟು ಸಾರ್ವಜನಿಕರು ಮನೆಯೊಳಗೆ ಪ್ರವೇಶ ಪಡೆಯಲು ಏನೇನೋ ಪ್ರಯತ್ನ ಪಡುತ್ತಿದ್ದಾರಂತೆ.


ಸಧ್ಯದಲ್ಲೇ ಸೀಸನ್ 5 ಪ್ರಾರಂಭವಾಗಲಿದೆ ಅಂತ ಕೆಲ ದಿನಗಳಿಂದ ಹೇಳಲಾಗ್ತಾ ಇದೆ. ಅದಕ್ಕೆ ಪೂರಕ ಎಂಬಂತೆ ಈಗ ಬಿಗ್ ಬಾಸ್ ಮನೆಯ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದು ಸೀಸನ್ 5ರ ಮನೆ ಸಿದ್ಧ ಗೊಳ್ತಾ ಇರೋ ಚಿತ್ರ ! ?


ಫೋಟೋಗಳನ್ನು ನೋಡಿದರೆ ಈ ಬಾರಿ ಬಿಗ್ ಬಾಸ್ ಮನೆ ಸ್ವಲ್ಪ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದೆ ಅನ್ನಬಹುದು.

Recommended