Darshan Shoots Airavata at JD(S) Office, Which Belongs To Congress, Triggers Fresh Controversy
  • 9 years ago
TV9 News: Darshan Shoots Airavata at JD(S) Office, Which Belongs To Congress, Triggers Fresh Controversy....,

ಬೆಂಗಳೂರಿನ ರೇಸ್​ಕೋರ್ಸ್​ ರಸ್ತೆಯಲ್ಲಿರೋ ಜೆಡಿಎಸ್ ಕಚೇರಿಯಲ್ಲಿ ದರ್ಶನ್ ಅಭಿನಯದ ಐರಾವತ ಚಿತ್ರದ ಶೂಟಿಂಗ್ ನಡೀತಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಈಗಾಗ್ಲೇ ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್​ಗೆ ಬಿಟ್ಟು ಕೊಡುವಂತೆ ಸುಪ್ರೀಂ ಕೋರ್ಟ್​ ಆದೇಶ ಮಾಡಿದೆ. ಆದ್ರೆ ಜನವರಿ 1ರ ಗಡುವು ಮುಗಿದಿದ್ದರೂ, ಕಚೇರಿಯನ್ನು ಕೆಪಿಸಿಸಿಗೆ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಜೆಡಿಎಸ್ ಎಂಎಲ್ಸಿ ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಐರಾವತ್ ಚಿತ್ರದ ಶೂಟಿಂಗ್​ಗೆ 2 ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ಕಾಂಗ್ರೆಸ್ ಮುಖಂಡರನ್ನು ಕೆಂಡಾಮಂಡಲವಾಗಿಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

ಈ ನಡುವೆ, ಬೆಂಗಳೂರಿನ ರೇಸ್​ಕೋರ್ಸ್​ ರಸ್ತೆಯಲ್ಲಿರೋ ಜೆಡಿಎಸ್ ಕಚೇರಿಯನ್ನ ಬಿಟ್ಟು ಕೊಡುವಂತೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಚೇರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​, ಇತ್ಥೀಚೆಗೆ ತೀರ್ಪು ನೀಡಿ ಜನವರಿ 1ರ ಮುನ್ನ ಕಚೇರಿಯನ್ನ ಕೆಪಿಸಿಸಿಗೆ ಬಿಟ್ಟು ಕೊಡುವಂತೆ ಆದೇಶ ಮಾಡಿತ್ತು. ಆದ್ರೆ ಜೆಡಿಎಸ್ ಈ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ ಜೆಡಿಎಸ್ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿದೆ.
------
ಕಚೇರಿ ವಿಚಾರ ಮೊದಲಿನಿಂದಲೂ ವಿವಾದಕ್ಕೀಡಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.

Tags; JDS Office, JDS office belongs to Congress, JDS To Vacate Party Office, JDS Party Office, Race Course Road, JDS loses its office, JDS To Return Its Office, Darshan Shooting at JDS Office, Darshan Airavata Shooting, JDS office for KPCC, High Court, Supreme Court, TV9, News, Videos..,
Recommended