Mysuru: Youths Felicitated for Saving Drowning Girl at Chunchanakatte Falls

  • 9 years ago
TV9 News: Mysuru: Youths Felicitated for Saving Drowning Girl at Chunchanakatte Falls..,

ಮೈಸೂರಿನ ಕೆಆರ್ ನಗರದ ಸರ್ಕಾರಿ ಅತಿಥಿ ಗೃಹ ಇವತ್ತು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯ್ತು. ಚುಂಚನಕಟ್ಟೆ ಜಲಪಾತಕ್ಕೆ ಬಿದ್ದು ಪ್ರಾಣ ಕಳ್ಕೊಳ್ತಿದ್ದ ಯುವತಿಯನ್ನ ಬಚಾವ್ ಮಾಡಿದ್ದ ನಾಲ್ವರು ಯುವಕರನ್ನ ಇಂದು ಸನ್ಮಾಸಲಾಯ್ತು. ಕೆ.ಆರ್​ ನಗರ ತಾಲೂಕಿನ ಅರ್ಜುನ್​ ಆದರ್ಶ, ಹರ್ಷ ಹಾಗೂ ಶ್ರೀಕಾಂತ್ ಎಂಬ ನಾಲ್ವರು ಯುವಕರನ್ನ ಸನ್ಮಾನಿಸಲಾಯ್ತು. ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜು ಹಾಗೂ ಕೆಆರ್ ನಗರ ಕ್ಷೇತ್ರದ ಶಾಸಕ ಸಾ.ರಾ ಮಹೇಶ್ ನಾಲ್ವರೂ ಯುಕವರಿಗೆ ಮೈಸೂರು ಪೇಟ ತೊಡಿಸಿದ್ರು. ಯುವಕರು ಮಾಡಿದ ಸಾಧನೆಯನ್ನ ಕೊಂಡಾಡಿದ್ರು.
--------------
ಡಿಸೆಂಬರ್ 20ರಂದು ಕೆ.ಆರ್​ ನಗರ ತಾಲೂಕಿನ ಚುಂಚನಕಟ್ಟೆ ಜಲಪಾತದಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದ ವೇಳೆ ಯುವತಿಯೊಬ್ಬಳು ಜಲಪಾತಕ್ಕೆ ಬಿದ್ದಿದ್ದಳು. ಅದೇ ವೇಳೆ ಅಲ್ಲಿಗೆ ಪ್ರವಾಸಕ್ಕೆ ತೆರಳಿದ್ದ ಈ ನಾಲ್ವರೂ ಯುವಕರೂ ಪ್ರಾಣದ ಹಂಗು ತೊರೆದು, ಸಾವಿನ ದವಡೆಗೆ ಸಿಲುಕಿದ್ದ ಯುವತಿಯನ್ನ ಬಚಾವ್ ಮಾಡಿದ್ರು. ಆದ್ರೆ, 15 ದಿನ ನಂತ್ರ ಈಯುವಕರ ಸಾಹಸಗಾಥೆ ಟಿವಿ9ನಲ್ಲಿ ಪ್ರಸಾರವಾಗ್ತಿದ್ದಂತೆಯೇ, ಸಂಸದ ಪುಟ್ಟರಾಜು ಹಾಗೂ ಶಾಸಕ ಸಾ.ರಾ ಮಹೇಶ್ ಯುವಕರನ್ನ ಸನ್ಮಾಸಲು ಮುಂದಾದ್ರು. ಅಷ್ಟೇ ಅಲ್ಲ, ಜನವರಿ 26ರಂದು ತಾಲೂಕು ಆಡಳಿತ ಈ ನಾಲ್ವರೂ ಯುವಕರಿಗೆ ಸನ್ಮಾನಿಸಲು ನಿರ್ಧರಿಸಿದೆ.

Recommended